ಯೋಗಿಯ ‘ಉತ್ತಮ ಪ್ರದೇಶ’

ಇವರೇ ಯೋಗಿ ಅದಿತ್ಯನಾಥ್. ಉತ್ತರ ಪ್ರದೇಶದ ಹೊಸ ಮುಖ್ಯಮಂತ್ರಿ.  ಭಾರತೀಯ ಜನತಾ ಪಾರ್ಟಿಗೆ ಭಾರಿ ಬಹುಮತ ಸಿಕ್ಕಿ, ಅತ್ಯಂತ ಕುತೂಹಲ ಮೂಡಿಸಿದ ಈ ಪೈಪೋಟಿ ಕೊನೆಗೂ ಅಂತ್ಯಗೊಂಡಿದೆ. ಮಾಧ್ಯಮದ ವಿವರಗಳ ಪ್ರಕಾರ, ಯೋಗಿ, ಮೊದಲೇ ಈ ವೋಟದಿಂದ ಹೊರಬಿದ್ದಿದರು. ಯಾಕೆಂದರೆ ಅಭಿವೃದ್ಧಿಯ ಮಾತುಗಳ್ನಾಡುತಿದ್ದ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು, ಓರ್ವ ಕೇಸರಿ ಬಣ್ಣಾಧಾರಿ ಸಾಧುವನ್ನು ಹೇಗೆ ಅಯ್ಕೆ ಮಾಡುವರು? ಸರ್, ನಿಮ್ಗೆ ಕೇಸರಿ ಬಣ್ಣ ಧರಿತರು, ಮುಂದಾಲೋಚನೆಗಳನ್ನು ಮಾಡುದಿಲ್ಲಎಂದು ಯಾರಪ್ಪಾ ಹೇಳಿದ್ರು?

ಸಾವಿರಾರು ಭಕ್ತವ್ರಂದ ಹೊಂದಿದ್ದ ಆ ಗೋರಖ್ಪುರ ಮಠದ ಪೀಠಾಧಿಪಥಿಯಾಗಿ ಇಷ್ಟು ವರ್ಷ ನಡೆಸಲಿಲ್ಲವೇ? ಅದು ಬಿಡಿ, 1998 ರಿಂದ ಸತತ 5 ಬಾರಿ ಭಾರತದ ಲೋಕ ಸಭೆಗೆ ಚುನಾಯಿತರಾಗಲಿಲ್ಲವೇ?.. ಇವುಗಳಿಗೆ ಏನೂ ಬೆಲೆಇಲ್ಲವೇ? ಇವರ ವಿಮರ್ಶಕರು, ಪ್ರತ್ಯುತರವಾಗಿ ಅದು ಸೇಫ್ ಸೀಟ್, ಅಲ್ಲಿ ಒಂದು ಹಿಂದೂ ಒಂಟೆ ನಿಂತರೂ ಗೆಲ್ಲುತ್ತೆ ಅಂದರೆ, ಆ ಮಾತು ನಮ್ಮ ಮತದಾರರನ್ನು ಮೂರ್ಖರಿಗೆ ಹೋಲಿಸಿದಂತಾಗಿರುತ್ತದೆ. ಅದು ಯಾರೇ ಆಗಲಿ, ಯಾವ ಸೀಟೂ ಆಗಲಿ, ಜನರು ಮತಯಾಚಿಸುದು, ಸಾಮರ್ಥ್ಯ ಉಳ್ಳವ ವ್ಯಕ್ತಿಗೆ ಮಾತ್ರ. ಇದೇ ಉತ್ತರ ಪ್ರದೇಶದಲ್ಲಿ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೇ ಇವೆ. ಇಲ್ಲದಿದ್ದಲ್ಲಿ, ಅದು ಯಾವನೋ, ‘ಯುವ’ ನಾಯಕ ರಾಹುಲ್ ಗಾಂಧಿಯ ಅಮೇಟಿ ಲೋಕ ಸಭೆ ಕ್ಹೇತ್ರದಲ್ಲಿಯಲ್ಲಿ, 5 ವಿಧಾನ ಸಭೆ ಸೀಟಿನಲ್ಲಿ 4 ರಲ್ಲಿ ಸೋಲು ಅನುಭವಿಸುವುದು ಕಾಂಗ್ರೆಸ್ ಪಕ್ಷಕ್ಕೆ 2019ರಲ್ಲಿ ಅದು ಸೇಫ್ ಸೀಟ್ ಅಂತ ಹೇಳಿಸಬಹುದೇ?

ಎಡ ಪಕ್ಷದವರು, ಮೋದಿ-ಅಮಿತ್ ಶಾಹ್ ರವರ ಈ ನಿರ್ಧಾರವನ್ನು ಬಲವಾಗಿ ವಿರೋಧಿಸಿದ್ದಾರೆ. ಪ್ರತಿ ರಾತ್ರಿ ಟಿವಿಯ ಚರ್ಚೆಗಳಲ್ಲಿ, ಎಲ್ಲಾ ದೊಡ್ಡ ರಾಜಕೀಯ ಪಕ್ಷದ ಮಧ್ಯದಲ್ಲಿ, ಒಂದು ಸ್ಥಾನ ಎಡ ಪಕ್ಷದ ವಕ್ತಾರರಿಗೂ ಇರುತ್ತದೆ. ಅದು ಹೇಗೋ, ನಮ್ಮ ದೇಶದಲ್ಲಿ, ಪಶ್ಚಿಮ ಬಂಗಾಲ ಹಾಗೂ ಕೇರಳದಲ್ಲಿ ಹೊರತುಪಡಿಸಿ, ಬೇರೆಲ್ಲೂ, ತನ್ನ ಅಭ್ಯರ್ಥಿಗಳ ಭದ್ರತಾ ಠೇವಣಿಯನ್ನೂ ಕಳಕೊಂಡ ಆ ಎಡ ಪಡೆ, ಇನ್ನೂ ‘ರಾಷ್ಟ್ರೀಯ’ ಪಕ್ಷ ಅನ್ನಿಸುತ್ತೆ. ಪಕ್ಷದ ಹೀನಾಯ ಸೋಲಿನ ಉತ್ತರ ಹುಡುಕುವುದನ್ನು ಬಿಟ್ಟು, ಇವುಗಳು ಬೇರೆ ಪಕ್ಷಗಳಿಗೆ ಬೋಧನೆ ನೀಡುತಾರಲ್ವ, ಏನು ಹೇಳುವುದು ಇದಕ್ಕೆ?

ನಿಜ, ಅವರ ಕಿರಿಯ ದಿನಗಳಲ್ಲಿ, ಯೋಗಿಯವರು, ಕೆಲವೊಂದು, ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಇಂದಿನ ದಿನಗಳಲ್ಲಿ, ಅವರು ಕೇವಲ, ಮೋದಿಯವರ ‘ಸಬ್ ಕಾ ಸಾಥ್- ಸಬ್ ಕಾ ವಿಕಾಸ್’ ಮಂತ್ರವನ್ನು ಮಾತ್ರ ಹೇಳುತಿದ್ದರು. ಸ್ವತಃ ಅವರ ಗೋರಖ್ಪುರ ಮಠದ ವಠಾರದಲ್ಲಿ, ಹಲವಾರು ಮುಸ್ಲಿಂ ಬಾಂಧವರು ಸಂತೋಷದಲ್ಲಿ ವಾಸಿಸುತ್ತಾರೆ. ಯೋಗಿಯವರ ಲೆಕ್ಕಿಗ, ಗೋಶಾಲೆಯ ಉಸ್ತುವಾರಿಯೂ ಮುಸ್ಲಿಂ ಬಾಂಧವರು.

Yogi Adityanath
ಉತ್ತರ ಪ್ರದೇಶದ ನೂತನ ಮುಖ್ಯ ಮಂತ್ರಿ ‘ಮಹಂತ್’ ಯೋಗಿ ಅದಿತ್ಯನಾಥ್

ಅವರ ವೇಷಭೂಷಣಗಳಿಂದ ಅವರು ಅಲ್ಪಸಂಖ್ಯಾತರ ವಿರೋಧಿ ಅಂತ ಹೇಳುದು ಸರಿಯಲ್ಲ.  ಹೈದರಾಬಾದಿನ ಸಂಸದ ಆಸದುದ್ದೀನ್ ಒವೈಸಿಯವರು, ಯೋಗಿಯ ಮುಸ್ಲಿಂ ಬೆಂಬಲಿಗರು ‘ಸ್ತೋಕ್ಕ್ಹೊಲ್ಮ್ ಸಿಂಡ್ರೋಮ್ದಿಂದ (Stockholm Syndrome)’ ಪೀಡಿತ ರಾಗಿದ್ದಾರೆ ಅಂತ ಹೇಳಿದ್ದರು. ಈಗ ಅದು ಕೋಮುವಾದಿ ಹೇಳಿಕೆ ಅಲ್ಲವೇ?

‘ದಿ ವೈರ್.ಇನ್’ನ (thewire.in) ಸಂಸ್ಥಾಪಕ ಯಸ್.ವರದರಾಜನ್ರವರು ಉತ್ತರ ಪ್ರದೇಶದ ಫಲಿತಾಂಶದ ಬಳಿಕ ಒಂದು ಲೇಖನ ಬರೆದರು. ಹೇಗೆ, ನಮ್ಮ ದೇಶದಲ್ಲಿ, ವೊಳ್ಳೆಯ ಪ್ರತಿಪಕ್ಷ ಇಲ್ಲದಿರುವದರಿಂದ, ಆ ಪಾತ್ರವನ್ನು ಮಾಧ್ಯಮದವರು ವಹಿಸಬೇಕು ಅಂತ. ಸ್ವಾಮಿ, ನೀವು ಮಾಧ್ಯಮದವರು. ಹೇಗೆ, ಸುದ್ಧಿ ಬರುತ್ತೋ, ಹಾಗೆನೇ ಅದನ್ನು ಪ್ರದರ್ಶಿಸುವುದು ನಿಮ್ಮ ಕರ್ತವ್ಯ. ಪ್ರತಿಪಕ್ಷ ಇಲ್ಲವೆಂದು ಅದರ ಪಾತ್ರ ವಹಿಸುವುದಲ್ಲ. ಈ ಕರ್ತವ್ಯ ಅವರು ಸರಿಯಾಗಿ ಮಾಡಿದ್ದಲ್ಲಿ, ಕೇರಳದಲ್ಲಿ, ಪ್ರತಿ ದಿನ ರಕ್ತದ ನದಿ ಹರಿಯುತಿರಲಿಲ್ಲ. ಇದಕ್ಕೆ ಅವರ ಪ್ರತಿವಾದವಿದೆಯೇ?

ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಪ್ರತಿಪಕ್ಷ ಇರಲೇಬೇಕು. ಅದು, ಸರ್ಕಾರಕ್ಕೆ ಒಂದು ಗುಲಾಮ ಇದ್ದಂತೆ. ಸರ್ಕಾರಕ್ಕೆ ಇನ್ನೂ ಒಳ್ಳೆಯರೀತಿಯ ಕೆಲಸಮಾಡಲು ಅದು ತಳ್ಳುತ್ತದೆ. ಭಾರತೀಯ ಜನತಾ ಪಾರ್ಟಿಗೆ ಬಹುಮತ ಸಿಕ್ಕಿದೆ, ಅವರು ಹೇಗೆ ರಾಜ್ಯವನ್ನು ಅದಳಿತ ಮಾಡುತ್ತಾರೆ ನೋಡಿ ಮತ್ತೆ ಕೊರತೆ ಇದ್ದಲ್ಲಿ ಪ್ರತಿಭಟಿಸುವುದು ಪ್ರಜಾಪ್ರಭುತ್ವದ ನಿಯಮ. ಅದನ್ನೇ ಮಾಡಿದ್ದರೆ ಪ್ರತಿಪಕ್ಷಕ್ಕೆ 2019 ರಲ್ಲಿ ಮೋದಿಯವರಿಗೆ ಸೋಲುಯೆತ್ನಿಸಲು ಸಂಭವ.

ಅದಕ್ಕಿಂತ ಮುಂಚೆ, ಯೋಗಿಯವರು, ಅವರ ಪತ್ರಿಕಾಗೋಷ್ಠಿಯಲ್ಲಿ ಹೇಳಿದಹಾಗೆ, ಉತ್ತರ ಪ್ರದೇಶವನ್ನು ‘ಉತ್ತಮ ಪ್ರದೇಶ’ ಮಾಡಿದರೆ, ಯಾವ ಮಾಧ್ಯಮ-ಪ್ರತಿಪಕ್ಷದವರು ಬಂದರೆ, ಭಾರತೀಯ ಜನತಾ ಪಾರ್ಟಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿರುವುದಿಲ್ಲ.

Leave a Comment